News Karnataka
ರಾಜಕೀಯ

ಕಮಲನಗರದಲ್ಲಿ ಭರ್ಜರಿ ರೋಡ್ ಶೋ

Grand Roadshow in Kamalanagar
Photo Credit : Ravi Mathapati

ಔರಾದ: ಚುನಾವಣಾ ಪ್ರಚಾರಕ್ಕಾಗಿ ಔರಾದ(ಬಿ) ಕ್ಷೇತ್ರಕ್ಕೆ ಅಗಮಿಸಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ನಾರಾಯಣ ರಾಣೆ ಅವರು ಮಂಗಳವಾರ ಕಮಲನಗರದಲ್ಲಿ ಬಿಜೆಪಿ ಅಭ್ಯರ್ಥಿ ಸಚಿವ ಪ್ರಭು.ಬಿ ಚವ್ಹಾಣ ಪರವಾಗಿ ಬೃಹತ್ ರೋಡ್ ಶೋ ನಡೆಸಿದರು.

ಔರಾದ(ಬಿ) ಕ್ಷೇತ್ರದಲ್ಲಿ ಸದಾ ಜನರೊಂದಿಗೆ ಇದ್ದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಪ್ರಭು.ಬಿ ಚವ್ಹಾಣ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಅಲಂಕೃತ ತೆರೆದ ವಾಹನದಲ್ಲಿ ಕೇಂದ್ರ ಸಚಿವ ನಾರಾಯಣ ರಾಣೆ, ಸಚಿವ ಪ್ರಭು.ಬಿ ಚವ್ಹಾಣ, ಗುಜರಾತಿನ ಮಾಜಿ ಶಾಸಕರಾದ ಅಮಿತ್ ಚೌಧರಿ, ಉದಗೀರ ಮಾಜಿ ಶಾಸಕರಾದ ಗೋವಿಂದ ಕೇಂದ್ರೆ, ಮುಖಂಡರಾದ ವಸಂತ ಬಿರಾದಾರ, ರಾಮಶೆಟ್ಟಿ ಪನ್ನಾಳೆ ಹಾಗೂ ಇತರರು ಇದ್ದರು.

ಕಮಲನಗರದ ಶನೇಶ್ವರ ಮಂದಿರದ ಬಳಿ ಚಾಲನೆ ಪಡೆದ ರೋಡ್ ಶೋ ಅಲ್ಲಮಪ್ರಭು ವೃತ್ತ, ಪೊಲೀಸ್ ಠಾಣೆ ಮಾರ್ಗ, ಪ್ರವಾಸಿ ಮಂದಿರ, ಬಸವೇಶ್ವರ ವೃತ್ತ, ಗ್ರಾಮ ಪಂಚಾಯತ್ ಕಾರ್ಯಾಲಯ ಸೇರಿದಂತೆ ಪ್ರಮುಖ ಮಾರ್ಗಗಳ ಮೂಲಕ ಸಂಚರಿಸಿ ಅಕ್ಕಮಹಾದೇವಿ ವೃತ್ತದ ಬಳಿ ಕೊನೆಗೊಂಡಿತು.

ಸಾವಿರಾರು ಜನ ಭಾಗಿ:
ರೋಡ್ ಶೋ ನಿಮಿತ್ತ ಕಮಲನಗರದಲ್ಲಿ ಜನಜಂಗುಳಿ ಸೇರಿತ್ತು. ಕಮಲನಗರದ ಪ್ರಮುಖ ರಸ್ತೆಗಳು ಕಾರ್ಯಕರ್ತರಿಂದ ತುಂಬಿದ್ದವು. ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ರೋಡ್ ಶೋಗೆ ಬೆಂಬಲಿಸಿದರು. ಯುವಕರು ಕುಣಿದು ಕುಪ್ಪಳಿಸಿದರು. ಮೆರವಣಿಗೆಯುದ್ದಕ್ಕೂ ಬಿಜೆಪಿ ಜಯಘೋಷಗಳು ಕೇಳಿಸಿದವು.

Ravi Mathapati

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *