ಔರಾದ: ತಾಲೂಕಿನ ಬಾದಲಗಾಂವ ಮತ್ತು ವನಮಾರಪಳ್ಳಿ ಗ್ರಾಮಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಶಂಕರ್ ರಾವ್ ದೊಡ್ಡಿ ಭೇಟಿ ನೀಡಿ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಮುಂಬರುವ ಚುನಾವಣೆಯ ಬಗ್ಗೆ ಸಮಾಲೋಚನೆ ನಡೆಸಿದರು.
ನಂತರ ಮಾತನಾಡಿದ ಅವರು, ನಾನು ಕೂಡ ಮುಂಬರುವ ವಿಧಾನಸಭೆ ಚುನಾವಣೆಯ ಎಮ್ ಎಲ್ ಎ ಟಿಕೆಟ್ ಆಕಾಂಕ್ಷಿ ಅಭ್ಯರ್ಥಿ ಆಗಿದ್ದೇನೆ. ಪಕ್ಷದಿಂದ ವರಿಷ್ಠರು ಯಾರಿಗೆ ಟಿಕೆಟ್ ನೀಡಿದರೂ ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ನಾವೆಲ್ಲರೂ ಸೇರಿ ಗೆಲ್ಲಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶಿವಾಜಿರಾವ ಭಾಸ್ಕರ್, ಸೋಪನರಾವ ಶೇರಿಕರ್, ಗೌತಮ ಶಿಂದೆ, ಸಂಜು ಕಾಂಬ್ಳೆ, ಸಿದ್ಧಾರ್ಥ್ ಭೋಸ್ಲೆ, ಗ್ಯನದೇವ್ ಭೋಸ್ಲೆ, ಶ್ರೀಮಂತ, ವಿಜಯಕುಮಾರ ಪಾಟೀಲ್, ಪ್ರಕಾಶ ವಾಘಮಾರೆ, ಅಶೋಕ ದರ್ಬಾರೆ, ವೈಜಿನಾಥ ಒಡೆಯರ್ ಮತ್ತು ಯುವಕರು ಉಪಸ್ಥಿತರಿದ್ದರು.