ಔರಾದ: ಈ ಬಾರಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಅಖಿಲ ಕರ್ನಾಟಕ ಡಾ.ಜಿ. ಪರಮೇಶ್ವರ್ ಯುವ ಸೈನ್ಯದ ತಾಲೂಕು ಅಧ್ಯಕ್ಷ ದತ್ತಾತ್ರಿ ಶಿಂಧೆ ಮತ್ತು ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಡಾ.ಜಿ. ಪರಮೇಶ್ವರ್ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಪ್ರಾಮಾಣಿಕ, ನಾಯಕ, ಹಿರಿಯ ಮುಖಂಡರು ಮತ್ತು ದಲಿತ ನಾಯಕರು. ಇವರಿಗೆ ರಾಜ್ಯದ ಮುಖ್ಯ ಮಂತ್ರಿ ಹುದ್ದೆ ಅಲಂಕರಿಸಿದರೆ ದಲಿತ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಹೋಗುತ್ತದೆ ಎಂದು ಹೇಳಿದರು. ದಲಿತರು ಸುಮಾರು 75 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಜೊತೆ ಬಂದವರು ಡಾ.ಜಿ. ಪರಮೇಶ್ವರ್ ಅವರು ಅನೇಕ ಬಾರಿ ಶಾಸಕರಾಗಿ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಮತ್ತು ರಾಜ್ಯದ ಉಪ ಮುಖ್ಯ ಮಂತ್ರಿಯಾಗಿ ಬಹಳಷ್ಟು ಪರಿಶ್ರಮಪಟ್ಟಿದ್ದಾರೆ. ಅವರಿಗೆ ನ್ಯಾಯಯುತವಾಗಿ ಪಕ್ಷವನ್ನು ಬಲವರ್ಧನೆ ಪಡಿಸಲು ಪಕ್ಷದ ವರಿಷ್ಠರು ಜವಾಬ್ದಾರಿ ನೀಡಬೇಕು.
ಪಕ್ಷವನ್ನು ತಳಮಟ್ಟದಿಂದ ಮೇಲ್ಮಟ್ಟದವರೆಗೆ ಬೆಳೆಸಿದ್ದಾರೆ ಅವರನ್ನು ಸಿಎಂ ಆಗಿ ಘೋಷನೆ ಮಾಡಬೇಕೆಂದು ಸುನಿಲ್ ಮಿತ್ರ ತಾಲೂಕ ಉಪಾಧ್ಯಕ್ಷ, ಸಂತೋಷ ಮೇತ್ರೆ ಉಪಾಧ್ಯಕ್ಷರು, ಕೇಶವ ಗುಡುಪಳ್ಳಿ ಕಾರ್ಯದರ್ಶಿ, ಸಂತೋಷ ಖಜಾಂಚಿ, ಭೀಮರಾವ್ ಶೆಂಬೆಳ್ಳಿ ಸಹ ಕಾರ್ಯದರ್ಶಿ ದತ್ತಾತ್ರಿ ಕಾಂಬಳೆ ನಾಗುರ, ಸೂರ್ಯಕಾಂತ ಮಮದಾಪು, ಪ್ರಕಾಶ್ ಅಲ್ಲಾಪುರ, ಶೇಖರ ಚಿಕ್ಕಿ, ಸೂರ್ಯಕಾಂತ ಬರದಾಪೂರ, ಶಾದುಲ್ ಪಠಣ, ಶರಣಪ್ಪ ಗೊಂಡ ಬರದಾಪೂರ, ರಾಜಕುಮಾರ್ ಸಂತೋಷ ಸೂರ್ಯವಂಶಿ, ಉಮಾಕಾಂತ, ಸೋನೆ ಬೋರಾಳ್ ಜಾನ್ಸನ್ ವರ್ಮ, ರಾಮಪ್ಪ ವಡಗಾಂಕರ್ ಆಗ್ರಹಿಸಿದ್ದಾರೆ.