ಔರಾದ: ತಾಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಸುಧಾಕರ ಕೊಳ್ಳುರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಯಿತು.
ಸಂದರ್ಭದಲ್ಲಿ ಸುಧಾಕರ ಕೊಳ್ಳುರ ಮಾತನಾಡಿ, ಬೆಲೆ ಏರಿಕೆಯಿಂದ ಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಮಾಡಲು ಈಗಾಗಲೇ ನಮ್ಮ ನಾಯಕರು ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್. ಪ್ರತಿ ಕುಟುಂಬದ ಯಜಮಾನಿಗೆ ₹2000 ಅಗತ್ಯ ವಸ್ತುಗಳ ಖರೀದಿಗೆ ಅನಕೂಲವಾಗಲಿದೆ. ಹಸಿವು ಮುಕ್ತ ರಾಜ್ಯಕ್ಕಾಗಿ 10kg ಅಕ್ಕಿ ನೀಡಲಾಗುವುದು, ಪ್ರತಿ ತಿಂಗಳು ಪದವೀಧರರಿಗೆ 3000ರೂ ಹಾಗೂ ಡಿಪ್ಲೊಮಾ ಪದವೀಧರರಿಗೆ 1500 ರೂ. ಭತ್ಯೆ ನೀಡಲು ಪ್ರಮಾಳಿಕೆ ಘೋಷಣೆ ಮಾಡಲಾಗಿದೆ ಎಂದು ಹೇಳಿದರು.
ಗ್ರಾಮದ ಮನೆ ಮನೆಗೆ ತೆರಳಿ ಪ್ರಣಾಳಿಕೆಯಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ನರ್ಸಿಂಗ್ ಪಾಟೀಲ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಶಂಕರ ನಿಸ್ಪತೆ, ಹರಿದೇವ ಸಂಗನಾಳ, ರಾಜು, ಶಿವಾಜಿ ಉಪಸ್ಥಿತರಿದ್ದರು.