ಔರಾದ: ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿರುವ ಪ್ರಭು ಚವ್ಹಾಣ್ ಅವರನ್ನು ಕೆಳಗಿಳಿಸಿ ಒಮ್ಮೆ ನನಗೆ ಆಯ್ಕೆ ಮಾಡಿ ಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ್ ಶಿಂಧೆ ಮನವಿಸಿದರು.
ತಾಲೂಕಿನ ಚೋ೦ಡಿಮುಖೇಡ, ನಂದಿಬಿಜಲಗಾಂವ್, ನಂದಿಬಿಜಲಗಾಂವ ತಾಂಡಾ, ಕಿಸಾನ್ ನಾಯ್ಕ ತಾಂಡ, ಸೊಸೈಟಿ ತಾಂಡ, ದಾಸರ ತಾಂಡ, ಚಿಕ್ಲಿ (ಯು), ಗಣೇಶಪೂರ (ಯು), ವಾಗನಗೇರಾ, ವಾಗನಗೇರಾ ತಾಂಡ, ಅಕನಾಪೂರ, ಗಂಗನಬೀಡ, ದಾಬಕಾ, ಮುತ್ತಖೇಡ್, ಬೇರ್ಡಾ ಗ್ರಾಮದಲ್ಲಿ ಮತಯಾಚನೆ ಮಾಡುವ ಮೂಲಕ ಮಾತನಾಡಿದರು.
ಔರಾದ್ ಮೀಸಲು ಕ್ಷೇತ್ರ ಕಳೆದ 15 ವರ್ಷದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಕ್ಷೇತ್ರ ಅಭಿವೃದ್ಧಿಯಾಗಬೇಕೆ೦ಬುವದು ಇಲ್ಲಿನ ಲಕ್ಷಾಂತರ ಜನರ ಸಂಕಲ್ಪವಾಗಿದೆ. ಬಿಜೆಪಿಯ ಕಮಿಷನ್ ಸರ್ಕಾರಕ್ಕೆ ಬೇಸತ್ತು ಜನ ಬದಲಾವಣೆ ಬಯಸಿದ್ದಾರೆ. ಔರಾದ್ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರಭು ಚವ್ಹಾಣರನ್ನು ಮನೆಗೆ ಕಳುಹಿಸಿ ನನಗೆ ವಿಧಾನಸಭೆಗೆ ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಏಕತಾ ಪೌಂಡೇಶನ್ ನಿಕಟಪೂರ್ವ ಅಧ್ಯಕ್ಷ ರವೀಂದ್ರ ಸ್ವಾಮಿ, ಮುಖಂಡ ಚರಣಸಿಂಗ್ ರಾಠೋಡ ಮಾತನಾಡಿದರು. ಪ್ರಮುಖರಾದ ಮೀನಾಕ್ಷಿ ಸಂಗ್ರಾಮ, ಡಾ. ಲಕ್ಷ್ಮಣ ಸೋರಳ್ಳಿಕರ, ರಮೇಶ ದೇವಕತ್ತೆ, ಅರುಣ ಪಾಟೀಲ್, ಧನಾಜಿ ಜಾಧವ, ಸಿದ್ದಾರ್ಥ ರಾಠೋಡ್, ಆನ೦ದ ಚವ್ಹಾಣ್, ತೇಜರಾವ ಮೂಳೆ, ಶಿವರಾಜ ದೇಶಮುಖ, ಪ್ರಕಾಶ ಪಾಟೀಲ, ಚನ್ನಪ್ಪ ಉಪ್ಪೆ, ಸುಧಾಕರ ಕೊಳ್ಳುರ, ಕಾಶಿನಾಥ ಜಾಧವ್, ಹಣಮಂತ ಸೂರ್ಯವಂಶಿ, ವೆಂಕಟರಾವ್ ಶಿಂಧೆ, ಡಾ. ಫೈಯಾಜ್ ಅಲಿ, ರೈತ ಸಂಘದ ಅಧ್ಯಕ್ಷ ಶ್ರೀಮಂತ ಬಿರಾದಾರ ಸೇರಿದಂತೆ ಅನೇಕರಿದ್ದರು.