ಔರಾದ: ಬಿಜೆಪಿ ಅಭ್ಯರ್ಥಿ ಪ್ರಭು ಚವ್ಹಾಣ ಔರಾದ್ ಕ್ಷೇತ್ರದ ಸಮುದಾಯಗಳ ಮಧ್ಯೆ ಜಗಳ ಹಚ್ಚಿ ದಾರಿ ತಪ್ಪಿಸುತ್ತಿದ್ದಾರೆ. ಜಾತಿ-ಜಾತಿಗಳ ಮಧ್ಯೆ ಜಗಳ ಹಚ್ಚಿ, ಶಾಂತಿ ಕದಡಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರವೀಂದ್ರ ಸ್ವಾಮಿ ಆರೋಪಿಸಿದ್ದಾರೆ. ಬೇಡಾರ, ದಂಡಾರಕುಮಟಾ, ಡೊಂಗರಗಾಳವ, ಕುರಬರವಾಡಿ, ಮಾಳೆ ಗಾಂದ, ಚಿಮ್ಮೇಗಾವ, ಚಿಮ್ಮೇಗಾಂವ ತಾಂಡ, ದೋಷರ ನಾಡಿ, ಹಂದಿಕೇರಾ, ಶಿವಪೂರ, ಡೋಣಗಾಂವ, ರ೦ಡ್ಯಾಳ, ಡೋಣಗಾಂವ ವಾಡಿ, ಕೋಟಗ್ಯಾಳ ಭೇಟಿ ನೀಡಿ ಮಾತನಾಡಿದರು.
ಒಗ್ಗಟ್ಟಿನ ಮರಾಠ ಸಮುದಾಯದಲ್ಲೂ ತನ್ನ ರಾಜಕೀಯ ಬೇಳೆ ಬೇಯಿಸಿಕೊ ಮಹಾರಾಜರ ಜಯಂತಿ ಮಾಡಲು ಬಿಡದೇ 144 ಕಲಂ ಜಾರಿ ಮಾಡುವ ಮೂಲಕ ವೇದಿಕೆ ತೆಗೆಸಿದ್ದಾರೆ. ಲಿಂಗಾಯತರಿಗೆ ಪ್ರಭು ಚವ್ಹಾಣ ನೀಡಿದ ಕೊಡುಗೆ ಏನು ಎಂದು ಪ್ರಶ್ನಿ ಸಿದ ಅವರು ಪಟ್ಟಣದಲ್ಲಿ ಲಿಂಗಾ ಯತ ಭವನ ನಿರ್ಮಾಣ ಮತ್ತು ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಚವ್ಹಾಣರಿಂದ ಆಗಿಲ್ಲ. ಇನ್ನೂ ನಿರ್ಮಾಣ ಮಾಡಲು ಕೂಡ ಬಿಟ್ಟಿಲ್ಲ, ತಮ್ಮ ಭೂಮಿ ಅಭಿವೃದ್ಧಿ ಪಡಿಸಿಕೊಳ್ಳಲು ಭವನ ದೇಣಿಗೆ ಪ್ರಚಾರ ಮಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಪ್ರಭು ಚವ್ಹಾಣ ಸರ್ವಾಧಿಕಾರವಾಗಿದ್ದು, ಮತದಾರರು ಚವ್ಹಾಣ ನಡೆಗೆ ಬೇಸತ್ತು ಹೋಗಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ ಶಿಂಧೆ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಒಂದು ಬಾರಿ ಅವಕಾಶ ಕೊಡಿ, ಔರಾದ್ ಕ್ಷೇತ್ರವನ್ನು ಕಳೆದ 15 ವರ್ಷದಲ್ಲಿ ಆಗದ ಅಭಿ ವೃದ್ಧಿ ಕೆಲಸ ಮಾಡುವ ಮೂಲಕ ಮಾದರಿ ಕ್ಷೇತ್ರ ಮಾಡುತ್ತೇನೆ ಇಲ್ಲಿಯ ಪ್ರಜ್ಞಾವಂತ ಮತದಾರರು ಬದಲಾವಣೆ ಮಾಡಲು ಮುಂದಾಗಿದ್ದಾರೆ. ಎಲ್ಲ ಗ್ರಾಮದಲ್ಲಿಯ ಕಾಂಗ್ರೆಸ್ ಪರ ಅಲೆ ಜೋರಾಗಿದೆ. ಕಾರ್ಯಕರ್ತರು ಕಾಂಗ್ರೆಸ್ ಸರಕಾರ ಮಾಡಿರುವ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಆನಂದ ಚವ್ಹಾಣ, ರಮೇಶ ದೇವಕತೆ, ರತ್ನ ಪಾಟೀಲ್, ಧನಾಜಿ ಜಾಧವ, ರಾಮಣ್ಣ ವಡಿಯಾರ, ಸುಧಾಕಾರ ಕೊಳ್ಳುರ, ಚೇತನ ಕಪ್ಪ ಕೇರೆ, ಪ್ರೇಮಾ ಗಂದಗೆ ಸೇರಿದಂತೆ ಇತರರು ಹಾಜರಿದ್ದರು.