ಔರಾದ: ಔರಾದ(ಬಿ) ಕ್ಷೇತ್ರದಿಂದ ಸತತ ನಾಲ್ಕನೇ ಅವಧಿಗೆ ಶಾಸಕನಾಗಿ ಆಯ್ಕೆಯಾಗಿರುವುದು ಅಭಿವೃದ್ಧಿ ಕೆಲಸಗಳಿಗೆ ಮತ್ತು ಕಾರ್ಯಕರ್ತರಿಗೆ ಸಿಕ್ಕ ಗೆಲುವಾಗಿದೆ ಎಂದು ಶಾಸಕ ಪ್ರಭು.ಬಿ ಚವ್ಹಾಣ ತಿಳಿಸಿದ್ದಾರೆ.
ಕೇವಲ ಅಭಿವೃದ್ಧಿಯ ಸಂಕಲ್ಪದೊಂದಿಗೆ ಕೆಲಸ ಮಾಡಿದ್ದೇನೆ. ನನ್ನ ಕೆಲಸಕ್ಕೆ ಜನತೆ ಗೌರವ ನೀಡಿದ್ದಾರೆ. ಔರಾದನ ಆರಾಧ್ಯದೈವ ಅಮರೇಶ್ವರರ ಕೃಪೆಯಿಂದಾಗಿ ಮತ್ತು ಜನತೆಯ ಆಶೀರ್ವಾದದಿಂದಾಗಿ ನಾಲ್ಕನೇ ಅವಧಿಗೆ ಶಾಸಕನಾಗಿ ಆಯ್ಕೆಯಾಗಿದ್ದು, ಅವರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ. ಚುನಾವಣೆಯಲ್ಲಿ ಎದುರಾದ ಹಲವು ಅಡೆತಡೆಗಳ ನಡುವೆಯೂ ಜನತೆ ನನ್ನ ಕೈಬಿಟಿಲ್ಲ. ಎಲ್ಲ ಮಹಾಜನತೆಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ನನ್ನ ಗೆಲುವಿಗೆ ಪಕ್ಷದ ತಾಲ್ಲೂಕು ಅಧ್ಯಕ್ಷರು, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರಗಳು, ಬೂತ್ ಅಧ್ಯಕ್ಷರು ಒಳಗೊಂಡು ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಾಕಷ್ಟು ಶ್ರಮ ವಹಿಸಿದ್ದಾರೆ. ಹೀಗೆ ನನ್ನ ಗೆಲುವಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಪ್ರಭು ಚವ್ಹಾಣ ಧನ್ಯವಾದ ತಿಳಿಸಿದ್ದಾರೆ.