ಔರಾದ: ಠಾಣಾಕುಶನೂರ ಗ್ರಾಮದಲ್ಲಿ ಶೋಭಾ ಮತ್ತು ಮನೋಹರ ದಂಪತಿಗಳಿಂದ ಪಂಡರಪೂರಕ್ಕೆ ಹೋಗುವ ಭಕ್ತಾದಿಗಳಿಗೆ ಪಾದಪೂಜೆ ನೇರವೇರಿಸಿ ಪ್ರಸಾದ ವ್ಯವಸ್ಥೆ ಮಾಡಿದರು.
ಔರಾದ ತಾಲೂಕಿನ ಗುಡಪಳ್ಳಿ ಗ್ರಾಮದ ಭಕ್ತಾದಿಗಳು ಪ್ರತಿ ವರ್ಷದಂತೆ ಈ ವರ್ಷವೂ ಯುಗಾದಿ ಹಬ್ಬದ ಪ್ರಯುಕ್ತ ಪಂಡರಪೂರದ ವಿಠಲ ರುಕ್ಷ್ಮೀಣಿ ದೇವರ ದರ್ಶನಕ್ಕೆ ಹೋಗುತ್ತಾರೆ. ಈ ವರ್ಷವು ದರ್ಶನಕ್ಕೆ ಹೋಗುವ ಸಂದರ್ಭದಲ್ಲಿ ಠಾಣಾಕುಶನೂರ ಗ್ರಾಮದಲ್ಲಿ ಶೋಭಾ ಮತ್ತು ಮನೋಹರ ದಂಪತಿಗಳು ಭಕ್ತಾದಿಗಳು ಬಂದ ತಕ್ಷಣ ಪಾದಪೂಜೆ ನೇರವೆರಿಸಿ ಅವರಿಗೆ ಪ್ರಸಾದ ವ್ಯವಸ್ಥೆ ಮಾಡಿ ರಾತ್ರಿ ಸಮಯದಲ್ಲಿ ತಮ್ಮ ಮನೆ ಯಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು.
ಮುಂಜಾನೆ ನಸುಕಿನ ಜಾವದಲ್ಲಿ ಅವರೆಲ್ಲರನ್ನು ಸ್ನಾನಕ್ಕೆ ವ್ಯವಸ್ಥೆ ಮಾಡಿ ಪ್ರಸಾದ ಮಾಡಿಸಿ ಅವರೆಲ್ಲರನ್ನು ಭಕ್ತಿಪೂರ್ವಕವಾಗಿ ಬೀಳ್ಕೊಟ್ಟರು. ಈ ವ್ಯವಸ್ಥೆ ಕಂಡ ಲಚಮಾರೆಡ್ಡಿ ಮಹಾರಾಜರು ದಂಪತಿಗಳಿಗೆ ಹೃದಯಪೂರ್ವಕವಾಗಿ ಕೊಂಡಾಡಿ ಆಶೀರ್ವಾದ ನೀಡಿದರು. ಈ ಸಂಧರ್ಭದಲ್ಲಿ ನಾಗಶೆಟ್ಟಿ ನಾಗಲಗಿದ್ದೆ, ನಾಗರೆಡ್ಡಿ ಬಸಪೂರೆ, ರವಿ ಬಿರಾದಾರ, ಸಂಗಾರೆಡ್ಡಿ ಧನ್ನೂರೆ, ಮಾಣಿಕರಾವ ಆಟೀಲ, ಸಿದ್ದಾರೆಡ್ಡಿ ಮುಂತಾದವರಿದ್ದರು