ಔರಾದ: ರಾಮ ನವಮಿಯನ್ನು ತಾಲೂಕಿನ ವಡಗಾಂವ ದೇ ಗ್ರಾಮದಲ್ಲಿ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು. ರಾಮ ನವಮಿ ಆಚರಣೆ ಸಮಿತಿ ಹಾಗೂ ಭಜರಂಗದಳ ವತಿಯಿಂದ ರಾಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಜೈ ಶ್ರೀರಾಮ ಘೋಷಣೆ ಮೊಳಗಿಸಲಾಯಿತು. ಧ್ವನಿ ವರ್ಧಕದಲ್ಲಿ ಮೊಳಗಿದ ಭಕ್ತಿ ಗೀತೆಗೆ ಯುವಕರು ಕುಣಿದು ಕುಪ್ಪಳಿಸಿದರು. ಗ್ರಾಮದ ಯುವ ಮುಖಂಡ ಬಾಲಾಜಿ ಕೋಳಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ರಾಮರ ಆದರ್ಶ ತತ್ವಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ರಾಮ ನ್ಯಾಯ, ನೀತಿ, ಧರ್ಮದ ಪ್ರತೀಕ. ಈ ಮೂರು ವಿಷಯಗಳು ಬಂದಾಗಲೆಲ್ಲ ಮೊದಲಿಗೆ ನೆನಪಾಗುವುದೇ ಅವರು. ಆಯೋಧ್ಯೆಯಲ್ಲಿ ಆದರ್ಶ ಆಡಳಿತ ನಡೆಸಿದ್ದರು. ಭಗವಾನ್ ರಾಮರ ಸ್ಮರಣೆಯಿಂದ ಜೀವನ ಮೌಲ್ಯ ಹೆಚ್ಚುತ್ತದೆ ಎಂದು ಹೇಳಿದರು.
ಮುಂದಿನ ರಾಮ ನವಮಿ ವೇಳೆಗೆ ಸಂಪೂರ್ಣವಾಗಿ ರಾಮ ಮಂದಿರ ನಿರ್ಮಿಸಲು ಎಲ್ಲರೂ ತನು, ಮನ, ಧನದಿಂದ ಕೈಜೋಡಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಯುವಕರು ಹಾಜರಿದ್ದರು.