ಔರಾದ: ಔರಾದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಕರಕ್ಯಾಳ ಗ್ರಾಮದ ಸೀಮೆಯಲ್ಲಿದ್ದ ಶ್ರೀ ಕ್ಷೇತ್ರ ಮಹಾದೇವ ಮಂದಿರದಲ್ಲಿ 25ನೇ ಅಖಂಡ ಶಿವನಾಮ ಸಪ್ತಾಹ ಕಾರ್ಯಕ್ರಮವನ್ನು ಜರುಗಿತು. ಕಾರ್ಯಕ್ರಮಕ್ಕೆ ಪೂಜ್ಯ ಗುರುಗಳಾದ ಶಿವಲಿಂಗ ಶಿವಾಚಾರ್ಯ ಮಠ ಸ೦ಸ್ಥಾನ ಹೇಡಗಾಪೂರ ಹಾಗೂ ಪೂಜ್ಯ ಗುರುಗಳಾದ ಶಂಭೂಲಿಂಗ ಶಿವಾಚಾರ್ಯ ಇವರು ಚಾಲನೆ ನೀಡಿದರು.
ಈ ಸ೦ದರ್ಭದಲ್ಲಿ ಪೂಜ್ಯ ಶಿವಲಿಂಗ ಶಿವಾಚಾರ್ಯರು ಮಾತನಾಡಿ, ಕರಕ್ಕಾಳ ಶ್ರೀಕ್ಷೇತ್ರ ಮಹಾದೇವ ಮಂದಿರವನ್ನು ಸಂತರ, ಭಕ್ತರ ತಪ ಭೂಮಿಯಾಗಿದೆ. ಭಕ್ತರ ಈ ಕ್ಷೇತ್ರ ಶಿವನ ಶಕ್ತಿ ಕೇಂದ್ರವಾಗಿದೆ ಇಲ್ಲಿ ಬಂದು ಶಿವನಾಮ ಚಿಂತನೆ ಮಾಡಿದರೆ ಎಲ್ಲ ಕಷ್ಟಗಳು ದೂರವಾಗುತ್ತವೆ ಎಂದರು.
ಪೂಜ್ಯ ಶಂಭೂಲಿಂಗ ಶಿವಾಚಾರ್ಯರು ಮಾತನಾಡಿ, ಅಖಂಡ ಶಿವನಾಮ ಸಪ್ತಾಹ ಮಾಡುತ್ತಿರುವುದು ಬಹಳ ಸಂತಷ ತ೦ದಿದೆ. ಭಕ್ತರೆಲ್ಲರು ಈ ಸಪ್ತಾಹದಲ್ಲಿ ಭಾಗಿಯಾಗಿ ಶಿವನ ಭಜನೆ ಕೀರ್ತನೆ ಹಾಗೂ ಪ್ರವಚನದ ಲಾಭ ಪಡೆಯಬೇಕು. ಎಲ್ಲರು ಶಿವನ ಭಕ್ತಿಗೆ ಪಾತ್ರರಾಗಬೇಕು ಎಂದು ನುಡಿದರು.
ಶಿವನಾಮ ಸಪ್ತಾಹ ಕಾರ್ಯ ಕ್ರಮದಲ್ಲಿ ಪ್ರತಿದಿನ ಮುಂಜಾನೆ ಶಿವಪಾಠ, ಅಭೀಷೇಕ ಹಾಗೂ ಪರಮ ರಹಸ್ಯ ಗ್ರಂಥದ ಪಾರಾಯಣ ನಡೆಯುತ್ತಿದೆ ಮಧ್ಯಾಹ್ನ ಗಾಥಾ ಭಜನೆ, ಸಾಯಂಕಾಲ ಪ್ರವಚನ ಹಾಗೂ ರಾತ್ರಿ ಶಿವಕಿರ್ತನೆ ಹಾಗೂ ಶಿವಜಾಗರಣೆ ಕಾರ್ಯಕ್ರಮ ನಡೆ ಯುತ್ತದೆ ಸಮಾರಂಭದಲ್ಲಿ ಎಲ್ಲ ಭಕ್ತರು ಭಾಗವಹಿಸಬೇಕೆ೦ದು ವಿನಂತಿಸಲಾಯಿತು.