ಔರಾದ: ತಾಲ್ಲೂಕಿನ ಕರ್ನಾಟಕ ಪಬ್ಲಿಕ್ ಶಿಕ್ಷಣ ಸಂಸ್ಥೆ ಪ್ರತಿ ವರ್ಷ ಕೊಡುವ ಸುಭಾಷ್ ಚಂದ್ರ ಬೋಸ್ ಸಾಧನಾ ಪುರಸ್ಕಾರ ಈ ಬಾರಿ 11 ಸಾಧಕರಿಗೆ ನೀಡಲಾಗಿದೆ.
ತಾಲ್ಲೂಕಿನ ಸಂತಪುರ ಗ್ರಾಮದ ಸುಭಾಷ್‌ಚಂದ್ರ ಭೋಷ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ 11 ಸಾಧಕರಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಮಿಲಿಂದ ಸೋಮವಂಶಿ, ಶಿಕ್ಷಣ ಕ್ಷೇತ್ರದಲ್ಲಿ ಸುನಿತಾ ಪಾಟೀಲ, ಮಾಧ್ಯಮ ಕ್ಷೇತ್ರದಲ್ಲಿ ಮನ್ಮಥಪ್ಪ ಸ್ವಾಮಿ, ಸಾಮಾಜಿಕ ಕ್ಷೇತ್ರದಲ್ಲಿ ಸುನೀಲ ವಾಘಮಾರೆ, ರತ್ನದೀಪ ಕಸ್ತೂರೆ, ಲಕ್ಷ್ಮಣ ಲಕ್ಕೆ, ಸತೀಶ ಮಜಗೆ, ಶಿವಲೀಲಾ ಪಡಸಾಲಗಿ, ರಜನಿಕಾಂತ ಮಡಿಕೆ, ಶಿವರುದ್ರಪ್ಪ ಕಾಂಬಳೆ, ಗೌತಮ ಮೇತ್ರೆ ಸನ್ಮಾನಿತರು.
ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದ ರಾಮಣ್ಣ ವಡೆಯರ್, ಅರ್ಹರಿಗೆ ಅಭ್ಯರ್ಥಿಗಳಿಗೆ ಪ್ರಶಸ್ತಿ ಕೊಟ್ಟರೆ ಆ ಪ್ರಶಸ್ತಿ ಗೌರವ ಹೆಚ್ಚುತ್ತದೆ. ಆ ಕೆಲಸ ಕರ್ನಾಟಕ ಪಬ್ಲಿಕ್ ಶಿಕ್ಷಣ ಸಂಸ್ಥೆಯವರು ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಶಿವಾಜಿರಾವ ಬೋರಾಳೆ ಅಧ್ಯಕ್ಷತೆ ವಹಿಸಿದರು. ಮುಖ್ಯಗುರು ಸೂರ್ಯಕಾಂತ ಸಿಂಗೆ, ಹಣ್ಮಾಪಾಜಿ, ಮುಖ್ಯ ಶಿಕ್ಷಕ ಮನೋಹರ ಬಿರಾದಾರ, ಮಲ್ಲಿಕಾರ್ಜುನ ಹಿಪ್ಪಳಗಾವೆ, ರಾಹುಲ ಖಂದಾರೆ, ವಿಶ್ವದೀಪ ಬೋರಾಳೆ ಮತ್ತಿತರರು ಇದ್ದರು. ನಂದಾದೀಪ ಬೋರಾಳೆ ಸ್ವಾಗತಿಸಿದರು. ಗುರುನಾಥ ದೇಶಮುಖ ನಿರೂಪಿಸಿದರು. ನಿವೃತ್ತ ಶಿಕ್ಷಕ ಅಮೃತರಾವ ಬಿರಾದಾರ, ಮಾರುತಿ ಉತ್ತಮ ದಂಪತಿಗೆ ಗೌರವಿಸಲಾಯಿತು. ನಂತರ ಮಕ್ಕಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.