ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನ್ಯೂಸ್ ಕರ್ನಾಟಕ ಮತ್ತು ಮಾಮ್ಸ್ ಆಫ್ ಮಂಗಳೂರು ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ವ್ಹಾವ್ ಮಾಮ್ಸ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾರ್ಚ್ 4ಮತ್ತು5ರಂದು ಪಾಂಡೇಶ್ವರದ ಫಿಝಾ ನೆಕ್ಸಸ್ ಮಾಲ್‍ನಲ್ಲಿ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಮಾರ್ಚ್ 4-2023ರಂದು ಮಧ್ಯಾಹ್ನ 3-30ಗೆ ಕೋಲ್ಡ್ ಬೌಲ್ ಕುಕ್ಕಿಂಗ್ ವಿದೌಟ್ ಫೈರ್ ಅಡುಗೆ ಸ್ಪರ್ಧೆ ನಡೆಯಲಿದೆ. ಮಾರ್ಚ್ 5-2023ರಂದು “ದ ಇಂಡಿಯನ್ ವುಮನ್” ಪರಿಕಲ್ಪನೆಯಲ್ಲಿ ಫ್ಯಾಶನ್ ಶೋ ಸ್ಪರ್ಧೆ ಕೂಡಾ ನಡೆಯಲಿದೆ. ಅಷ್ಟೇ ಅಲ್ಲದೆ ಅದೇ ದಿನ ನೆರೆದವರ ಸಮ್ಮುಖದಲ್ಲಿ ಸಮಾಜದಲ್ಲಿ ಎಲೆ ಮರೆ ಕಾಯಿಯಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕಿಯರನ್ನು ಅಭಿನಂದಿಸುವ ಅರ್ಥಪೂರ್ಣ ಕಾರ್ಯವೂ ನಡೆಯಲಿದೆ ಎಂದು ಮಂಗಳೂರು ನ್ಯೂಸ್ ಕರ್ನಾಟಕ ಯೂಟ್ಯೂಬ್ ವಾಹಿನಿಯ ಎಕ್ಸಿಕ್ಯೂಟಿವ್ ಮ್ಯಾನೇಜರ್ ಕೆನ್ಯೂಟ್ ಜೀವನ್ ಪಿಂಟೋ ತಿಳಿಸಿದ್ದಾರೆ.