ಔರಾದ: ಬೀದರ್ ಜಿಲ್ಲೆಯ ಕಮಲನಗರ, ಹುಲಸೂರು, ಭಾಲ್ಕಿ ಹಾಗೂ ಚಿಟಗುಪ್ಪ ತಾಲೂಕು ಕೇಂದ್ರಗಳಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಿಸುವಂತೆ ಸಮಾಜ ಸೇವಕ ಗುರುನಾಥ ವಡ್ಡೆ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ನಾಲ್ಕು ತಾಲೂಕುಗಳಲ್ಲಿ ಕ್ರೀಡಾಂಗಣದ ಅಗತ್ಯ ಇದೆ. ಪ್ರತಿ ವರ್ಷ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಹಮ್ಮಿಕೊಳ್ಳಗುತ್ತದೆ. ಸೂಕ್ತ ಕ್ರೀಡಾಂಗಣ ಇಲ್ಲದೆ ಇರುವುದರಿಂದ ಕ್ರೀಡಾಪಟುಗಳಿಗೆ ತರಬೇತಿ ಪಡೆಯಲು ಅನಾನುಕೂಲವಾಗುತ್ತಿದೆ. ಆದ್ದರಿಂದ ಸರ್ಕಾರದ ಕ್ರೀಡಾ ನೀತಿಯಂತೆ ಶೀಘ್ರದಲ್ಲಿ ಕಮಲನಗರ, ಚಿಟಗುಪ್ಪ, ಭಾಲ್ಕಿ, ಹುಲಸೂರು ಕೇಂದ್ರಗಳಲ್ಲಿ ಕ್ರೀಡಾಂಗಣ ನಿರ್ಮಿಸುವಂತೆ ಗುರುನಾಥ ವಡ್ಡೆ ಅಗ್ರಹಿಸಿದ್ದಾರೆ.